Shorts ಕ್ರೀಯೇಟರ್ ಗಳಿಗಾಗಿ $100 ಮಿಲಿಯನ್ ಡಾಲರ್ ಹಂಚಲು ಹೊರಟ YouTube

ಜಗತ್ತಿನ ಅತಿ ದೊಡ್ಡ, ಜನಪ್ರಿಯ ವಿಡಿಯೋ ಪ್ಲಾಟ್‌ಫಾರಂ ಯೂಟ್ಯೂಬ್‌, ತನ್ನ ಯೂಟ್ಯೂಬರ್‌ಗಳಿಗೆ ವೇದಿಕೆ ಕಲ್ಪಿಸುವ ಜೊತೆಗೆ, ಸಂಭಾವನೆಯನ್ನು ನೀಡುತ್ತಿದೆ. ಈಗ short ವಿಡಿಯೋಗಳನ್ನು ನಿರ್ಮಿಸುವವರಿಗೂ ಕೊಡಲು ನಿರ್ಧರಿಸಿದೆ

September 21, 2020, Brazil. In this photo illustration a YouTube Shorts logo is seen displayed on a smartphone

ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಕಂಟೆಂಟ್ ಗಳ ಪ್ರಾಮುಖ್ಯತೆಯನ್ನು ಜಗತ್ತಿಗೆ ಪರಿಣಾಮಕಾರಿಯಾಗಿ ಸಾರಿದ್ದ youTube ಈಗ ಇದೇ ದಿಸೆಯಲ್ಲಿ ಮತ್ತೊಂದು ಹೆಜ್ಜೆಯಿಟ್ಟಿದೆ. ಭಾರತದಲ್ಲಿ ಅತೀ ಹೆಚ್ಚಾಗಿ ಬಳಕೆಯಲ್ಲಿದ್ದ ಟಿಕ್-ಟಾಕ್ ಮಾದರಿಯ ಸಣ್ಣ ವೀಡಿಯೋಗಳನ್ನು ತಯಾರಿಸುವವರಿಗಾಗಿ (YouTube Shorts) ಬರೋಬ್ಬರಿ $100 ಮಿಲಿಯನ್ (ಅಂದಾಜು ರೂ. 735 ಕೋಟಿ) ಮೀಸಲಿಟ್ಟಿದೆ. ಇದು ಭಾರತದ ಹಾಗೂ ಅಮೇರಿಕಾದ ಯೂಟ್ಯೂಬ್ ಬಳಕೆದಾರರಿಗೆ ಮಾತ್ರ ಅನ್ವಯವಾಗುವ ಆಫರ್.

2021-2022ರ ಸಾಲಿಗೆ ಮುಂದಿನ ತಿಂಗಳಿನಿಂದ ಈ ಯೋಜನೆ ಆರಂಭವಾಗಲಿದೆ. ಯುವ ಜನತೆಯನ್ನು ಯೂಟ್ಯೂಬ್ ಕಡೆಗೆ ಸೆಳೆಯುವ ಉದ್ದೇಶದಿಂದ ರೂಪಿಸಲಾಗಿರುವ ಈ ಯೋಜನೆ, ಅತೀ ಹೆಚ್ಚು ಬೆಂಬಲಿಗರನ್ನು ಹೊಂದಿರುವವರಿಗೆ ಉತ್ತಮ ಆದಾಯವನ್ನು ಕೂಡಾ ತಂದುಕೊಡಬಲ್ಲದು. ಇದರಿಂದಾಗಿ ಯೂಟ್ಯೂಬ್ ಇನ್’ಫ್ಲುಯೆನ್ಸರ್ ಗಳ ಸಂಖ್ಯೆಯೂ ಹೆಚ್ಚಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಯಾವ ಯೂಟ್ಯೂಬ್ ಕ್ರೀಯೇಟರ್ ಗಳ ವೀಡಿಯೋಗಳಿಗೆ ಹೆಚ್ಚಿನ ಎಂಗೇಜ್’ಮೆಂಟ್ ಲಭಿಸುವುದೋ, ಅವರಿಗೆ ಪ್ರತೀ ತಿಂಗಳು ಹಣ ಪಾವತಿಸುವುದಾಗಿ ಯೂಟ್ಯೂಬ್ ಹೇಳಿದೆ. Shortsನಲ್ಲಿ ಜಾಹಿರಾತುಗಳ ಪ್ರಸಾರವನ್ನು ಕೂಡಾ ಪರೀಕ್ಷಿಸಲಾಗುವುದು, ಎಂದಿದೆ.

ಏನಿದು YouTube Shorts?

ಮನರಂಜನೆಗಾಗಿ ಸಣ್ಣ ವೀಡಿಯೋಗಳನ್ನು ಅತೀ ಪರಿಣಾಮಕಾರಿಯಾಗಿ ಬಳಸಿದ ಸಂಸ್ಥೆ ಟಿಕ್ ಟಾಕ್. ಮುರು ವರ್ಷಗಲ ಅವಧಿಗೆ ಅಮೇರಿಕಾದಲ್ಲಿ ಟಿಕ್ ಟಾಕ್ ತನ್ನ ಬಳಕೆದಾರರಿಗಾಗಿ ಸುಮಾರು ಒಂದು ಬಿಲಿಯನ್ ಡಾಲರ್ (ಅಂದಾಜು 7,350 ಕೋಟಿ) ವ್ಯಯಿಸಿದೆ. ಇಂತಹ ವೀಡಿಯೋಗಳು ಮಾರ್ಕೆಟ್’ನಲ್ಲಿ ಒಳ್ಳೆಯ ಆದಾಯ ನೀಡುತ್ತಿರುವುದನ್ನು ಮನಗಂಡ ಇತರ ಸಂಸ್ಥೆಗಳು ಕುಡಾ ಟಿಕ್ ಟಾಕ್ ಹಾದಿಯನ್ನು ಅನುಸರಿಸಿವೆ.

ಇನ್ಸ್ಟಾಗ್ರಾಮ್ ನಲ್ಲಿ ಲಭ್ಯವಿರುವ Reels, ಸ್ನಾಪ್ ಚಾಟ್ ನ Spotlightನಂತೆಯೇ ಯೂಟ್ಯೂಬ್ ಕೂಡಾ ತನ್ನ ಬಳಕೆದಾರರಿಗಾಗಿ Shorts ಎಂಬ ಸೇವೆಯನ್ನು ನೀಡುತ್ತಿದೆ.

ಭಾರತದಲ್ಲಿ ಅಷ್ಟೇನೂ ಜನಪ್ರಿಯವಾಗದಿದ್ದರೂ, ಸ್ನಾಪ್ ಚಾಟ್ ತನ್ನ ಬಳಕೆದಾರರಿಗಾಗಿ ಕಳೆದ ಒಂದು ವರ್ಷದಲ್ಲಿ ಪ್ರೆತಿ ದಿನ ಒಂದು ಮಿಲಿಯನ್ ಡಾಲರ್ (ಅಂದಾಜು 7 ಕೋಟಿ)ಯಷ್ಟು ಹಣವನ್ನು ವ್ಯಯಿಸುತ್ತಿದೆ.

ಈಗ ಇದೇ ಮಾದರಿಯನ್ನು ಅನುಸರಿಸಿರುವ ಯೂಟ್ಯೂಬ್ ಕೂಡಾ ಟಿಕ್ ಟಾಕ್ ನಂತೆಯೇ ತನ್ನ ಬಳಕೆದಾರರಿಗೆ ಹಣ ಪಾವತಿಸುವ ಯೋಜನೆಯನ್ನು ಹೊರತಂದಿದೆ.

ಈ ಯೋಜನೆಯನ್ನು ಬಳಸಿಕೊಳ್ಳುವುದು ಹೇಗೆ?

ಇದು ಬಹಳ ಸುಲಭ. ಆದರೆ, ಬೆಣ್ಣೆಯಿಂದ ಕೂದಲು ತೆಗೆದಂತೆ ಎಂಬ ಭಾವನೆ ಬೇಡ. ಯೂಟ್ಯೂಬ್ ನಿಂದ ಪ್ರತಿ ತಿಂಗಳು ಚೆಕ್ ಪಡೆಯಲು ನೀವು ಮಾಡಬೇಕಾಗಿರುವುದು ಇಷ್ಟೇ, ಸಾವಿರಾರು ಜನರು ಇಷ್ಟಪಡುವಂತಹ, ಅತೀ ಹೆಚ್ಚು ಶೇರ್, ಕಮೆಂಟ್ ಮತ್ತು ಲೈಕ್ ಮಾಡುವಂತಹ ನಿಮ್ಮ ಸ್ವಂತ ವೀಡಿಯೋಗಳನ್ನು ತಯಾರಿಸಿ ಅಪ್ ಲೊಡ್ ಮಾಡಬೇಕು. ಈ ವಿಡಿಯೋಗಳು ಯೂಟ್ಯೂಬ್ ನ Community Guidelinesಗಳ ಪಾಲನೆ ಮಾಡಬೇಕು.

ಇದು ಶಾರ್ಟ್ ವೀಡಿಯೋಗಳಿಗಾಗಿ ಯೂಟ್ಯೂಬ್ ತೆಗೆದುಕೊಂಡಿರುವ ಮೊದಲ ಹೆಜ್ಜೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹಣ ಯೂಟ್ಯೂಬ್ ಶಾರ್ಟ್ ಮೇಲೆ ಹೂಡಿಕೆಯಾಗುವ ಸಾಧ್ಯತೆಯಿದೆ.

“YouTube Shortsಗಳನ್ನು ಮಾನಿಟೈಸ್ ಮಾಡುವ ಹಂತಗಳಲ್ಲಿ ಇದು ನಮ್ಮ ಮೊದಲನೇ ಹೆಜ್ಜೆ. ಇದನ್ನು ಮೊದಲ ಆದ್ಯತೆಯಾಗಿ ನಾವು ಪರಿಗಣಿಸಿದ್ದೇವೆ. ಎಲ್ಲವೂ ಸರಿಯಾಗಿ ಕಾರ್ಯನಿರ್ವಹಿಸುವವರೆಗೂ ನಾವು ಸಕ್ರಿಯರಾಗಿ ಕೆಲಸ ಮುಮದುವರೆಸುತ್ತೇವೆ,” ಎಂದು ಯೂಟ್ಯೂಬ್ ಹೇಳಿದೆ.

ಈಗ ಯೂಟ್ಯೂಬ್ ಶಾರ್ಟ್ಸ್ ನ ಸೇವೆಯಲ್ಲಿಯೂ ಸುಧಾರಣೆ ತಂದಿದ್ದು, ರೆಕಾರ್ಡಿಂಗ್ ಸಮಯವನ್ನು ಒಂದು ನಿಮಿಷಕ್ಕೆ ಏರಿಸಲಾಗಿದೆ. ಅಟೋಮ್ಯಾಟಿಕ್ ಕ್ಯಾಪ್ಶನ್ ನೀಡುವ ವ್ಯವಸ್ಥೆ ನೀಡಲಾಗಿದೆ. ಇದರೊಂದಿಗೆ ನಿಮ್ಮ ಫೋನ್ ಗ್ಯಾಲರಿಯಲ್ಲಿರುವ ಫೋಟೊಗಳನ್ನು ಕೂಡಾ ಬಳಸಿಕೊಳ್ಳಬಹುದಾಗಿದೆ.

ಭಾರತದಲ್ಲಿ ಟಿಕ್ ಟಾಕ್ ನಿಷೇಧಗೊಂಡ ನಂತರ ರೀಲ್ಸ್ ಹಾಗೂ ಸ್ಪಾಟ್ ಲೈಟ್ ಆ ಸ್ಥಾನವನ್ನು ತುಂಬಲು ಪ್ರಯತ್ನಿಸಿದರೂ ಅಂದಕೊಂಡ ಮಟ್ಟಕ್ಕೆ ಯಶಸ್ವಿಯಾಗಲಿಲ್ಲ. ಈಗಾಗಲೇ ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಯೂಟ್ಯೂಬ್ ತಮ್ಮ ಸೇವೆಯಲ್ಲಿ ಸುಧಾರಣೆಯನ್ನು ತರುವ ಮೂಲಕ ಭಾರತದಲ್ಲಿ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳುವತ್ತ ಹೊರಟಿದೆ. ಇದರೊಂದಿಗೆ ಯೂಟ್ಯೂಬ್ ಕ್ರೀಯೆಟರ್ ಗಳಿಗೆ ಹಣ ಸಂಪಾದಿಸುವ ಉತ್ತಮ ಹಾದಿಯನ್ನು ಕುಡಾ ತೆರೆದಿಟ್ಟಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.