ಝೂಮ್‌ ಮೀಟಿಂಗ್‌ಗಳಲ್ಲಿ ನೋಟ್ಸ್‌ ಮಾಡುವ ಅಗತ್ಯವಿಲ್ಲ, ಈಗ ಮಾತಾಡಿದ್ದೆಲ್ಲಾ ಅಕ್ಷರವಾಗುತ್ತೆ!

ಝೂಮ್‌ ಹಲವು ವಿವಾದಗಳ ನಡುವೆಯೂ ತನ್ನ ಸೇವೆಯನ್ನು ಉತ್ತಮಗೊಳಿಸುವುದಕ್ಕೆ ಶ್ರಮಿಸುತ್ತಿದೆ. ಎರಡು ತಿಂಗಳಲ್ಲಿ ಎಲ್ಲತರದ ಕಂಪನಿ ಸಭೆಗಳು, ಚರ್ಚೆಗಳಿಗೆ ಅವಲಂಭಿಸಲಾಗಿದ್ದ ಆಪ್‌ ಇದು. ಈಗ ಟ್ರಾನ್‌ಸ್ಕ್ರಿಪ್ಷನ್‌ ಸೇವೆಯನ್ನು ಪರಿಚಯಿಸುತ್ತಿದೆ

ಝೂಮ್‌ನಲ್ಲಿ ಮೀಟಿಂಗ್‌ ಮಾಡುವುದೇನೊ ಸುಲಭವಾಯಿತು. ಆದರೆ ಮೀಟಿಂಗ್‌ನ ‘ಮಿನಿಟ್ಸ್‌’ ಅಂದರೆ ವಿವರಗಳನ್ನು ಬರೆದುಕೊಳ್ಳಲೇಬೇಕಿತ್ತು. ವಿಡಿಯೋ ರೆಕಾರ್ಡ್‌ ಮಾಡುವ ಅವಕಾಶವಿದೆಯಾದರೂ ಕಚೇರಿ ವ್ಯವಹಾರಗಳಿಗೆ ಕಾಗದ ರೂಪದಲ್ಲಿ ಅಥವಾ ಅಕ್ಷರ ರೂಪದಲ್ಲೇ ಕಡತಗಳನ್ನು ನಿರ್ವಹಿಸಲೇಬೇಕು.

ಹಾಗಾಗಿ ಝೂಮ್‌ ಮೀಟಿಂಗ್‌ ನಡೆಸುವಾಗಲೂ ಟಿಪ್ಪಣಿ ಮಾಡುವ ಕೆಲಸ ಅನಿವಾರ್ಯವಾಗಿತ್ತು. ಈಗ ಝೂಮ್ ಅದನ್ನೂ ಸುಲಭಗೊಳಿಸಿದೆ. ರಿಯಲ್‌ ಟೈಮ್‌ ಚಾಟ್‌ ಟ್ರಾನ್‌ಸ್ಕ್ರಿಪ್ಷನ್‌ ಸೇವೆಯಲ್ಲಿ ಹೆಸರು ಮಾಡಿರುವ ಆಟರ್.ಎಐ ನೆರವಿನೊಂದಿಗೆ ಮೀಟಿಂಗ್‌ ನಡೆಯುವ ಚರ್ಚೆಗಳನ್ನು ಅದೇ ಸಮಯದಲ್ಲೇ ನೇರವಾಗಿ ಅಕ್ಷರ ರೂಪಕ್ಕೆ ಒದಗಿಸುತ್ತಿದೆ.

ಮೀಟಿಂಗ್‌ನಲ್ಲಿರುವವರು ಈ ಪಠ್ಯವನ್ನು ತಮ್ಮ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳುವುದಕ್ಕೆ ಝೂಮ್‌ ಅನುವು ಮಾಡಿಕೊಡುತ್ತಿದೆ. ಕರೆ ಮಾಡಿರುವವರು, ಅಗತ್ಯ ಸಂದರ್ಭಗಳಲ್ಲಿ ಪಠ್ಯವನ್ನು ಇನ್ನೊಬ್ಬ ಕಾಲರ್‌ಗೆ ಟ್ಯಾಗ್‌ ಮಾಡಬಹುದು.

ಈ ಟ್ರಾನ್‌ಸ್ಕ್ರಿಪ್ಷನ್‌ ಸೇವೆ, ವಿಡಿಯೋ ಕಾನ್ಫರೆನ್ಸ್‌, ಉಪನ್ಯಾಸಗಳ ವಿಷಯದಲ್ಲಿ ಬಹಳ ಅನುಕೂಲಕರವಾಗಿದೆ. ಉಪನ್ಯಾಸವನ್ನು ಕೇಳಿದ ಮೇಲೆ, ಅದರ ಪಠ್ಯವನ್ನು ಪಡೆದುಕೊಂಡು ನಂತರ ಅಧ್ಯಯನಕ್ಕೆ ಬಳಸಿಕೊಳ್ಳಲು ಸಾಧ್ಯವಿದೆ. ಆದರೆ ಈ ಸೇವೆ ಉಚಿತವಾಗಿ ಲಭ್ಯವಿಲ್ಲ. ಅದಕ್ಕಾಗಿ ದರ ನಿಗದಿ ಮಾಡಲಾಗಿದ್ದು, ಅದರಂತೆ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.